ಹೊಸಶಕೆ ನ್ಯೂಸ್-ಕೊಪ್ಪಳ : ಆಯುರ್ವೇದದಲ್ಲಿ ‘ಬಸ್ತಿ’ ಅಂದರೆ ಮೂತ್ರವಹ, ಸ್ರೋತಸ್ ಒಂದು ಪ್ರಾಣಾಯತನವಾಗಿದ್ದು, ವೈದ್ಯರು ಆಯುರ್ವೇದ ಮೂಲಕ ಉತ್ತಮ ಚಿಕಿತ್ಸೆ ನೀಡಬಹುದೆಂದು ಎಸ್.ಡಿ.ಎಂ ಆಯುರ್ವೇದ ಮಹಾವಿದ್ಯಾಲಯಗಳ ನಿರ್ದೇಶಕರಾದ ಡಾ. ಪ್ರಸನ್ನ. ಎನ್. ರಾವ್ ಹೇಳಿದರು.
ನಗರದ ಶ್ರೀ ಶಿವಶಾಂತವೀರ ಮಂಗಲ ಭವನದಲ್ಲಿ ಗುರುವಾರ ನಡೆದ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ರಚನಾಶಾರೀರ, ಕ್ರಿಯಾ ಶಾರೀರ, ಕಾಯಚಿಕಿತ್ಸಾ, ಪಂಚಕರ್ಮ ಹಾಗೂ ಶಲ್ಯತಂತ್ರ ವಿಭಾಗದಿಂದ “ಪ್ರಸ್ರರವಣ 2025” ರಾಷ್ಟ್ರೀಯ ಆಯುರ್ವೇದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮೂತ್ರವಹ ರೋಗಗಳಿಗೆ ಮನೆ ಮದ್ದಿನಿಂದ ಹಿಡಿದು ಶಸ್ತ್ರ ಚಿಕಿತ್ಸೆಯವರೆಗೂ ಆಯುರ್ವೇದ ಚಿಕಿತ್ಸೆಗಳ ಮಹತ್ವವನ್ನು ತಮ್ಮ ದೀರ್ಘ ಅನುಭವಗಳೊಂದಿಗೆ ಹಂಚಿಕೊಂಡರು.
ಗುಜರಾತಿನ ಎಂ.ಎ.ಎ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಎನ್.ಗುಪ್ತಾ ಮಾತನಾಡಿ ಆಯುರ್ವೇದವನ್ನು ವೈಜ್ಞಾನಿಕವಾಗಿ ನೋಡುವುದರ ಜೊತೆಗೆ ವೈದಿಕವಾಗಿಯೂ ತಿಳಿದುಕೊಂಡು ವೈದ್ಯಕೀಯ ವೃತ್ತಿಯಲ್ಲಿ ಅಳವಡಿಸಿ ಕೊಳ್ಳಬೇಕೆಂದರು.
ಡಾ. ಶೈಲಜಾ ಮಾತನಾಡಿ ಚಿಕ್ಕಮಕ್ಕಳಲ್ಲಿ ಆಗುವ ಮೂತ್ರರೋಗಗಳ ಬಗ್ಗೆ ವಿಶ್ಲೇಸಿದರು. ಸಮ್ಮೇಳನದ ವೈಜ್ಞಾನಿಕ ಗೋಷ್ಠಿಯಲ್ಲಿ ರಾಷ್ಟ್ರೀಯ ಆಯುರ್ವೇದ ಸಂಸ್ಥಾನ, ಜೈಪುರದ ಡಾ. ಸ್ವಪ್ನಾ. ಬಿ ವಿವಿಧ ಮೂತ್ರರೋಗ ಶಸ್ತ್ರ ಚಿಕಿತ್ಸೆ ಸಂಭಂಧಿತ ರೋಗಗಳ ಬಗ್ಗೆ ತಿಳಿಸಿದರು.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಹಾಂತೇಶ ಸಾಲಿಮಠ ಇವರು ಮೂತ್ರರೋಗಗಳಿಗೆ ಆಯುರ್ವೇದ ಚಿಕಿತ್ಸೆಯನ್ನು ಉದಾಹರಣೆಗಳೊಂದಿಗೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿಶ್ಲೇಷಣೆ ಮಾಡಿದರು . ತಿಲಕ ಆಯುರ್ವೇದ ಮಹಾವಿದ್ಯಾಲಯ,ಪುಣೆಯ ಡಾ. ತರನ್ನುಮ್ ಪಟೇಲ್ ಇವರು ಮೂತ್ರ, ಸ್ರೋತೋವಹ ಕ್ರಿಯೆಗಳ ಮೇಲೆ ವಿಶೇಷ ಉಪನ್ಯಾಸ ಮಂಡನೆ ಮಾಡಿದರು. ಮಹಾವಿದ್ಯಾಲಯದ ಕಾರ್ಯಾಧ್ಯಕ್ಷರಾದ ಸಂಜಯ ಕೊತಬಾಳ, ಶಾರದಮ್ಮ ಕೊತಬಾಳ ಬಿ.ಬಿ.ಎಂ ಕಾಲೇಜಿನ ನಿರ್ದೇಶಕರಾದ ಮಹೇಶ ಮುದುಗಲ್ ಉಪಪ್ರಾಂಶುಪಾಲರಾದ ಡಾ. ಸುರೇಶ ಹಕ್ಕಂಡಿವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಘಟಕರಾದ ಡಾ. ಕೆ.ಬಿ.ಹಿರೇಮಠ ಸ್ವಾಗತಿಸಿದರು , ಡಾ. ರಾಜಶೇಖರ ಶೆಟ್ಟರ್ ದನಾರ್ಪಣೆ ಸಲ್ಲಿಸಿದರು. ಈ ರಾಷ್ಟ್ರೀಯ ಸಮ್ಮೇಳನದಲ್ಲಿ ರಾಜ್ಯದ 4೦೦ ಹಾಗೂ ಹೊರ ರಾಜ್ಯದ 15 ಪ್ರತಿನಿಧಿಗಳು ಭಾಗವಹಿಸಿದ್ದರು. ನಾಳೆ ಫೆ14 ರಂದು ಜರುಗುವ ಈ ರಾಷ್ಟ್ರೀಯ ಆಯುರ್ವೇದ ಸಮ್ಮೇಳನದಲ್ಲಿ ವಿಶೇಷ ಅತಿಥಿ ಉಪನ್ಯಾಸಕರಾಗಿ ಡಾ. ಅವಿನಾಶ. ಓದುಗೌಡರ್, ಡಾ. ಶ್ರೀಪತಿ ಅಡಿಗ ಹಾಗೂ ಡಾ. ಪ್ರಸನ್ನ ಕುಲಕರ್ಣಿ, ಡಾ.ಸಿ.ಆರ್ ಯಾದವ್ ಆಗಮಿಸಲಿದ್ದಾರೆ.