Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಅವಲೋಕನ

ಫೆ. 14 ರಂದು ಮೈಲಾರಲಿಂಗೇಶ್ವರ ಕಾರಣಿಕೋತ್ಸವ

graochandan1 by graochandan1
February 5, 2025
in ಅವಲೋಕನ, ಕಲೆ-ಸಾಹಿತ್ಯ-ಸಂಸ್ಕೃತಿ, ಕ್ರೀಡೆ, ಜಿಲ್ಲೆ, ದೇಶ, ಪರಿಸರ, ಪ್ರಾದೇಶಿಕ, ರಾಜಕೀಯ, ರಾಜ್ಯ, ಶಿಕ್ಣಣ-ಆರೋಗ್ಯ, ಸಾಮಾಜಿಕ, ಸುದ್ದಿ
0
ಫೆ. 14 ರಂದು ಮೈಲಾರಲಿಂಗೇಶ್ವರ ಕಾರಣಿಕೋತ್ಸವ
Share on FacebookShare on Twitter

* ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರಿಂದ ಕಾರಣಿಕದ ಗೊರವಯ್ಯ ರಾಮಣ್ಣ ಹಾಗೂ ಬಾಬುದಾರರಿಗೆ ಕಂಕಣಧಾರಣೆ
ಹೊಸಶಕೆ ನ್ಯೂಸ್-ಹೂವಿನಹಡಗಲಿ: ತಾಲ್ಲೂಕಿನ ಮೈಲಾರದಲ್ಲಿ ಮಂಗಳವಾರ ರಥ ಸಪ್ತಮಿಯಂದು ಹಾಲು ಉಕ್ಕಿಸುವ ಸಾಂಪ್ರದಾಯಿಕ ಆಚರಣೆಯೊಂದಿಗೆ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಜಾತ್ರೆಗೆ ಚಾಲನೆ ನೀಡಲಾಯಿತು. ಹಾಗೂ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರು ಕಾರಣಿಕದ ಗೊರವಯ್ಯ ರಾಮಣ್ಣ ಹಾಗೂ ಬಾಬುದಾರರಿಗೆ ಕಂಕಣಧಾರಣೆ ಮಾಡಿದರು
ಬೆಳಿಗ್ಗೆ ಮೈಲಾರಲಿಂಗಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿ, ಕಂಕಣಧಾರಣೆ ಮಾಡಲಾಯಿತು. ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರು ಕಾರಣಿಕದ ಗೊರವಯ್ಯ ರಾಮಣ್ಣ ಸೇರಿದಂತೆ ಎಲ್ಲ ಬಾಬುದಾರರಿಗೆ ಕಂಕಣಧಾರಣೆ ಮಾಡಿದರು. ಬಳಿಕ ದೇವಸ್ಥಾನದ ರಂಗ ಮಂಟಪದಲ್ಲಿ ಹಾಲು ಉಕ್ಕಿಸುವ ಕಾರ್ಯಕ್ರಮ ನೆರವೇರಿತು. ಈಶಾನ್ಯ ದಿಕ್ಕಿನೆಡೆಗೆ ಹಾಲು ಉಕ್ಕಿ ಹರಿಯಿತು. ‘ಈ ದಿಕ್ಕುಗಳಲ್ಲಿ ಮಳೆ, ಬೆಳೆ ಸಮೃದ್ಧವಾಗಲಿದೆ’ ಎಂಬುದು ಭಕ್ತರ ನಂಬಿಕೆ.


ಇದಕ್ಕೂ ಮುನ್ನ ಕ್ಷೇತ್ರದ ಹೆಗ್ಗುರುತು ಆಗಿರುವ ಕಾರಣಿಕದ ಬಿಲ್ಲಿಗೆ ಪೂಜೆ ನೆರವೇರಿಸಲಾಯಿತು. ದೇವಸ್ಥಾನದ ಅರ್ಚಕ ಪ್ರಮೋದ್ ಭಟ್ ಪೌರೋಹಿತ್ಯ ನೆರವೇರಿಸಿದರು. ದೇವಸ್ಥಾನದಲ್ಲಿ ರಥಸಪ್ತಮಿ ಆಚರಣೆಯ ಬಳಿಕ ಸ್ವಾಮಿಯ ಉತ್ಸವವು ಮೌನಸವಾರಿಯಲ್ಲಿ ಡೆಂಕನ ಮರಡಿಗೆ ತೆರಳಿತು. ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಹಾಗೂ ಬಾಬುದಾರರು, ಗ್ರಾಮಸ್ಥರು ಇದ್ದರು.
== ಕಾರಣಿಕ ಜರುಗುವವರೆಗೆ ಸ್ವಾಮಿಯ ಉತ್ಸವ ಮೂರ್ತಿ ಮರಡಿಯಲ್ಲೇ ಪ್ರತಿಷ್ಠಾಪನೆಗೊಳ್ಳಲಿದೆ. ದೇವಸ್ಥಾನದಲ್ಲಿ 11 ದಿನಗಳವರೆಗೆ ಪೂಜೆ ಹಾಗೂ ಗಂಟೆಯ ನಾದ ಮೊಳಗುವುದಿಲ್ಲ. ಫೆ. 14 ರಂದು ಕಾರಣಿಕ ನೆರವೇರುವವರೆಗೂ ಹರಕೆ ಹೊತ್ತ ಭಕ್ತರು ಹಗಲು-ರಾತ್ರಿ ವಾಸ್ತವ್ಯವಿದ್ದು ಮರಡಿ ಕಾಯುತ್ತಾರೆ. ಹರಕೆ ತೀರಿಸುವರಿಗೆ ಭಕ್ತರು ಅಂಬಲಿ ಮಜ್ಜಿಗೆ, ಬೆಲ್ಲದ ಪಾನಕ ನೀಡುತ್ತಾರೆ.==

Previous Post

ರಾಜ್ಯದ ಪ್ರವಾಸೋದ್ಯಮ ನೀತಿಯಡಿ 28 ಪ್ರವಾಸೋದ್ಯಮ ಯೋಜನಾ ಪ್ರಸ್ತಾವಗಳಿಗೆ ಅನುಮೋದನೆ’ : ಸಚಿವ ಎಚ್.ಕೆ.ಪಾಟೀಲ

Next Post

05/02/2025

graochandan1

graochandan1

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2026 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2026 Hosashakenews - Powered by KIPL.

error: Content is protected !!