*ರಾಜ್ಯದಲ್ಲಿ ಒಟ್ಟು 11 ರೋಪ್‌ವೇಗಳನ್ನು ನಿರ್ಮಿಸಲು ವ್ಯಾವಹಾರಿಕ ಸಲಹೆ ಹೊಣೆ ‘ರೈಟ್ಸ್’ ಸಂಸ್ಥೆಗೆ
ಬೆಂಗಳೂರು: ‘ರಾಜ್ಯದ ಪ್ರವಾಸೋದ್ಯಮ ನೀತಿಯಡಿ ಎರಡು ಮೆಗಾ ಸೇರಿ ಒಟ್ಟು 28 ಪ್ರವಾಸೋದ್ಯಮ
ಯೋಜನಾ ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಉನ್ನತಮಟ್ಟದ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘28 ಯೋಜನೆಗಳ ಪೈಕಿ ಒಂದಕ್ಕೆ ಮಾತ್ರ ಸ್ಥಳ ವೀಕ್ಷಣೆಯ ಷರತ್ತು ವಿಧಿಸಲಾಗಿದೆ. ಈ ಯೋಜನೆಗಳ ಮೂಲಕ ಒಟ್ಟು ₹793 ಕೋಟಿ ಬಂಡವಾಳ ಹೂಡಿಕೆ ಆಗಲಿದೆ. ನಾಲ್ಕು ಸಾವಿರ ನೇರ ಉದ್ಯೋಗಗಳು ಸೃಷ್ಟಿ ಆಗಲಿವೆ, ‘ಎರಡು ಮೆಗಾ ಯೋಜನೆಗಳಲ್ಲಿ ಹಂಪಿ ಬಳಿ 99 ವಸತಿ ಕೊಠಡಿಗಳನ್ನು ಹೊಂದಿದ ದೊಡ್ಡ ಹೋಟೆಲ್ ನಿರ್ಮಾ ಣವೂ ಸೇರಿದೆ. ಪೂರ್ಣ ಪ್ರಮಾಣದ ಬಂಡವಾಳ ಹೂಡುವ ಖಾಸಗಿ ಸಂಸ್ಥೆಗಳಿಗೆ ನೀತಿ ಪ್ರಕಾರ ಪ್ರೋತ್ಸಾಹ ಧನ ಮತ್ತಿತರ ಸವಲತ್ತುಗಳನ್ನು ಸರ್ಕಾರ ನೀಡಲಿದೆ’ ಎಂದರು.
‘ಉನ್ನತಮಟ್ಟದ ಸಮಿತಿಯು ಪ್ರಾಥಮಿಕ ತೀರುವಳಿ ಮತ್ತು ನೋಂದಣಿ ಪ್ರಸ್ತಾವಗಳಿಗೂ ಒಪ್ಪಿಗೆ ನೀಡಿದೆ. ಈ ಅರ್ಜಿಗಳು ಯಾವುದೇ ವರ್ಷದ್ದಾಗಿರಲಿ ಅನುಮತಿಯಂತೆ ಪ್ರವಾಸೋದ್ಯಮ ನೀತಿ ವ್ಯಾಪ್ತಿಗೆ ಒಳಪಡಲಿದ್ದು, ಪ್ರೋತ್ಸಾಹ ಧನ, ವಿನಾಯಿತಿ ಮತ್ತಿತರ ನೆರವು ಸಿಗಲಿದೆ’ ಎಂದು ಸಚಿವರು ಹೇಳಿದರು.
ವ್ಯಾವಹಾರಿಕ ಸಲಹೆ ಹೊಣೆ ‘ರೈಟ್ಸ್’ ಸಂಸ್ಥೆಗೆ: ‘ರಾಜ್ಯದಲ್ಲಿ ಒಟ್ಟು 11 ರೋಪ್‌ವೇಗಳನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ. ಈ ಪೈಕಿ, ತುಮಕೂರು ಜಿಲ್ಲೆಯ ಮಧುಗಿರಿ, ಕೊಡಗು ಜಿಲ್ಲೆಯ ಮಲ್ಲಳ್ಳಿ ಫಾಲ್ಸ್ ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಮೂರು ರೋಪ್‌ವೇ ಪ್ಯಾಕೇಜ್‌ಗಳಿಗೆ ವ್ಯಾವಹಾರಿಕ ಸಲಹೆಗಾರ ಹೊಣೆಯನ್ನು ‘ರೈಟ್ಸ್’ ಸಂಸ್ಥೆಗೆ ನೀಡಲಾಗಿದೆ’ ಎಂದು ಸಚಿವ ಪಾಟೀಲ ವಿವರಿಸಿದರು.
==‘ಬಜೆಟ್ ಹೋಟೆಲ್‌ಗಳಿಗೆ ₹5 ಕೋಟಿ ಬಂಡವಾಳ ಹೂಡಬೇಕಾಗುತ್ತದೆ. ಸರ್ಕಾರದಿಂದ ಶೇ 15ರಷ್ಟು ಅಥವಾ ಗರಿಷ್ಠ ₹2 ಕೋಟಿವರೆಗೆ ಸಹಾಯಧನ ಲಭಿಸಲಿದೆ. ಪ್ರೀಮಿಯಂ ಹೋಟೆಲ್‌ಗಳಿಗೆ ₹10 ಕೋಟಿ ಬಂಡವಾಳ ಹೂಡಿದರೆ ಸಹಾಯಧನದ ಮೊತ್ತ ಶೇ 15 ಅಥವಾ ಗರಿಷ್ಠ ₹5 ಕೋಟಿ ಲಭಿಸಲಿದೆ’ : ಎಚ್.ಕೆ. ಪಾಟೀಲ, ಪ್ರವಾಸೋದ್ಯಮ ಸಚಿವರು==