ಹೊಸ ಶಕೆ ನ್ಯೂಸ್,
ಯಲಬುರ್ಗಾ : ಶ್ರೀ ಮಠದಲ್ಲಿ ಬಸವತತ್ತ್ವಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸರ್ವಧರ್ಮ ಸಾಮೂಹಿಕ ವಿವಾಹ, ಗೋವುಗಳ ರಕ್ಷಣೆ, ಸಮ್ಮೇಳನ, ಪುರಾಣ, ಪ್ರವಚನ ನಡೆಸುವ ಮೂಲಕ ಸಾಹಿತ್ಯಾಸಕ್ತಿರಿಗೆ, ಸಂಗೀತಗಾರನ್ನು ಪೊಷಿಸುವ ಮೂಲಕ ಭಕ್ತ ಸಮೂಹದಲ್ಲಿ ಅಚ್ಚಳಿಯದೇ ಉಳಿದಿರುವ ಬಸವಲಿಂಗೇಶ್ವರ ಶ್ರೀಗಳ ಕಾರ್ಯ ಇಂದಿನ ಮಠಾಧೀಶರಿಗೆ ಸ್ಫೂರ್ತಿಯಾಗಿದೆ ಎಂದು ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ವೀರಣ್ಣ ಹುಬ್ಬಳ್ಳಿ ಹೇಳಿದರು.
ಪಟ್ಟಣದ ಶ್ರೀ ಮೊಗ್ಗಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಬಸವಲಿಂಗೇಶ್ವರ ಮಹಾಸ್ವಾಮಿಗಳ ೨೩ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಸೋಮವಾರ ಶ್ರೀ ವೀರಣ್ಣ ಹುಬ್ಬಳ್ಳಿ ಅವರ ಕುಟುಂಬಸ್ಥರಿಂದ ಶ್ರೀಗಳಿಗೆ ತುಲಾಭಾರ ಸೇವೆ ಸಲ್ಲಿಸಿ ಮಾತನಾಡಿದ ಅವರು,ಹಾನಗಲ್ ಕುಮಾರಸ್ವಾಮಿಯವರು ಶಿವಯೋಗ ಮಂದಿರದಲ್ಲಿ ಸ್ಥಾಪಿಸಿದ ಸಾಂಸ್ಕೃತಿ, ಆಧ್ಯಾತ್ಮಿಕ ಪಾಠಶಾಲೆಯ ಸಪ್ತ ಶಿಷ್ಯರಲ್ಲೊಬ್ಬರಾಗಿದ್ದರು. ಆಧ್ಯಾತ್ಮಿಕ, ಧಾರ್ಮಿಕ ಕ್ಷೇತ್ರವಲ್ಲದೇ, ಯೋಗಾಸನ,ಹಾಗೂ ಕೃಷಿ ಕ್ಷೇತ್ರದಲ್ಲಿಯೂ ಅಪಾರ ಸಾಧನೆ ಮಾಡಿದ್ದಾರೆ. ಈ ಭಾಗದಲ್ಲಿ “ನಡೆದಾಡುವ ದೇವರು” ಎಂದೆ ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬಸವಲಿಂಗೇಶರ ಶ್ರೀಗಳು ಮಾತನಾಡಿ, ಯಾವುದೇ ಮಠಗಳು ಬೆಳೆದು ಸಮಾಜಮುಖಿಯಾಗಿ ನಿರ್ಮಾಣಗೊಂಡಲ್ಲಿ ಅದು ಸಮಾಜದ ಆಸ್ತಿಯಾಗುತ್ತದೆ. ಮಠಾಧೀಶರು ಹಾಗೂ ಭಕ್ತರು ಒಂದಾಗಿ ಮಠಗಳನ್ನು ಬೆಳೆಸುವ ಮೂಲಕ ಸಂಸ್ಕಾರವಂತ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ತಾಲೂಕ ಕ.ಕಾ.ನಿ. ಪತ್ರಕರ್ತ ಸಂಘದಿಂದ ಶ್ರೀಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಗೇರಿಯ ಶ್ರೀ ಗುರು ಸಿದ್ದೇಶ್ವರ ಸ್ವಾಮೀಜಿ, ಚಿಕ್ಕಮ್ಯಾಗೇರಿ ಭೂಕೈಲಾಸ ಮಠದ ಶ್ರೀ ಗುರು ಶಾಂತವೀರ ಸ್ವಾಮೀಜಿ,ಪಪಂ ಸದಸ್ಯ ಬಸಲಿಂಗಪ್ಪ ಕೊತ್ತಲ್, ಕಳಕಪ್ಪ ತಳವಾರ,ಶಕುಂತಲಾ ದೇವಿ ಮಾಲಿ ಪಾಟೀಲ, ಭವರಸಿಂಗ್ ರಾಜ ಪುರೋಹಿತ,ಮಂಜುನಾಥ ಪತಂಗರಾಯ, ಮಲ್ಲಪ್ಪ ಭೂತೆ, ಮಹೇಶ್ ಹುಬ್ಬಳ್ಳಿ , ಶರಣಪ್ಪ ದಿವಟರ, ಬಸವರಾಜ್ ಕೊಳ್ಳಿ ಸೇರಿದಂತೆ ಇತರರು ಇದ್ದರು.