ಶ್ರೇಷ್ಠ 69 ವರ್ಷಗಳು ಇತಿಹಾಸ, ಪರಂಪರೆಯ ಬಿನ್ನಾಳ ಬಸವೇಶ್ವರ ಜಾತ್ರಾ ಮಹೋತ್ಸವ
ಅಖಂಡ ಭಾರತ ವಿಶಾಲ ಕರ್ನಾಟಕದಲ್ಲಿ ಸುವರ್ಣಮಯವೆಂದು ಹೆಸರಾಂತರಾದ ಅಂಗೈಕ್ಯ ಪರಮಪೂಜ್ಯ ಶ್ರೀ ಜಯದೇವ ಜಗದ್ಗುರು ಮಹಾಸ್ವಾಮಿಗಳು ಬೃಹನ್ಮಠ ಚಿತ್ರದುರ್ಗ ಇವರ ಜನ್ಮಸ್ಥಳವಾದ ಬಿನ್ನಾಳ ಗ್ರಾಮ, ಕುಕನೂರ ತಾಲೂಕ, ಕೊಪ್ಪಳ ಜಿಲ್ಲೆ ಇವರ ದಿವ್ಯಪ್ರಕಾಶದಲ್ಲಿ ಶ್ರೀ ಬಿನ್ನಾಳ ಬಸವೇಶ್ವರ ಜಾತ್ರಾ ಮಹೋತ್ಸವ ವಿದ್ಯುತ್ ದೀಪಗಳ ಕಂಗೊಳಿಸುತ್ತಿರುವ ಶ್ರೀ ಬಿನ್ನಾಳ ಬಸವೇಶ್ವರ ದೇವಸ್ಥಾನ : ಲೇಖನ : ಬಸವರಾಜ ಕೊಪ್ಪದ ಬಿನ್ನಾಳ.
ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಮಠಗಳ ಪೈಕಿ ಒಂದಾಗಿರುವ ಇಲ್ಲಿನ ಎರೆಯ ಭಾಗದ , ಜಿಲ್ಲೆಯ ಗಡಿಭಾಗದ ತನ್ನದೇ ಆದ ಶ್ರೇಷ್ಠ 69 ವರ್ಷ ಗಳು ಪರಂಪರೆ, ಇತಿಹಾಸ ಹೊಂದಿದೆ. ಬಿನ್ನಾಳ ಗ್ರಾಮದಲ್ಲಿ ಪ್ರತಿ ವರ್ಷ ದಂತೆ ಸಾಂಪ್ರದಾಯಕವಾಗಿ ನಡೆದುಬಂದ ಸುಕ್ಷೇತ್ರ ಬಿನ್ನಾಳ ಬಸವೇಶ್ವರ ಜಾತ್ರಾಹೋತ್ಸವವು ಮೂರು ದಿನಗಳಕಾಲ ವೈಭವದಿಂದ ನಡೆಯಲಿದ್ದು, ಆಗಸ್ಟ 11 ರಂದು ಸೋಮವಾರ ಸಾಯಂಕಾಲ 5.30 ಗಂಟೆಗೆ ಮಹಾ ರಥೋತ್ಸವ ಜರುಗಲಿದೆ.
ಶ್ರಮಜೀವಿಗಳ ಬದುಕು :ಬಿನ್ನಾಳ ಗ್ರಾಮದ ಭಕ್ತರು ಭೂತಾಯಿಯನ್ನು ನಂಬಿಕೊAಡು ಬದುಕನ್ನು ಕಟ್ಟಿಕೊಂಡ ಶ್ರಮಜೀವಿಗಳ ರೈತಾಪಿ ವರ್ಗವನ್ನು ಬಹು ಸಂಖ್ಯಾತರನ್ನ ಹೊಂದಿರುವ ಗ್ರಾಮ, ಬರಗಾಲಕ್ಕೆ ಹೆಸರಾದ ಗ್ರಾಮ, ಈ ಬಸವೇಶ್ವರಗೆ ಬರಗಾಲದ ಬಂಟ ಎಂಬ ರೂಡಿನಾಮುವೆ ಉಂಟು, ಇಂತಹ ಗ್ರಾಮದಲ್ಲಿ ರೈತರು ತಮ್ಮ ಭೂಮಿಗೆ ಹಳ್ಳದ ಉಸುಕು ಹೇರಿ ನೀರಾವರಿಯ ಭೂಮಿಗಿಂತ ಹೆಚ್ಚು ತೆಗೆಯುವ ಸುತ್ತು ಹತ್ತಾರ ಹಳ್ಳಿಗೆ ಉಸುಕಿನ ನೀರಾವರಿ ಪದ್ಧತಿಯ ಹೇಳಿಕೊಟ್ಟ ಭಿನ್ನಾಳ ಗ್ರಾಮದ ರೈತರ ಹೆಮ್ಮೆಯ ವಿಷಯವೇ ಸರಿ. ಮೂಲತಃ ಬಿನ್ನಾಳ ಗ್ರಾಮವು ಕೂಲಿ, ಕೃಷಿ ಕಾರ್ಮಿಕರ ಊರು, ಈ ಗ್ರಾಮದ ಸೀಮೆ ತುಂಬಾ ಚಿಕ್ಕದು ಈ ಗ್ರಾಮದ ರೈತರು ಭೂತಾಯಿಯನ್ನು ನಂಬಿ ಶ್ರಮವಹಿಸಿ ದುಡಿದು ಅಕ್ಕ ಪಕ್ಕದ ಊರು ದಾಟಿ ಸೀಮೆ ಹಬ್ಬಿದೆ ಇದು ಬಿನ್ನಾಳ ಗ್ರಾಮದ ರೈತ ಮಕ್ಕಳ ಹೆಮ್ಮೆ ಶ್ರೀ ಬಿನ್ನಾಳ ಬಸವೇಶ್ವರ ಕೃಪ ಎಂದು ನಂಬಿರುವ ಜನರು.
ಶ್ರೀ ಬಸವೇಶ್ವರ ಜಾತ್ರೋತ್ಸವ ಪ್ರಾರಂಭದಲ್ಲಿ ನಂದಿಕೋಲು ಉತ್ಸವದೊಂದಿಗೆ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಿದ್ದರು ಕಳೆದ ಐದು ವರ್ಷದಿಂದ ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳ ನಿರ್ದೇಶನದಂತೆ ಗ್ರಾಮದ ಎಲ್ಲಾ ಭಕ್ತರು ಸಹಕಾರದಿಂದ ಕಳೆದ ಐದು ವರ್ಷಗಳಿಂದ ಶ್ರೀ ಬಿನ್ನಾಳ ಬಸವೇಶ್ವರ ಜಾತ್ರಾ ಮಹೋತ್ಸವವನ್ನು ಮಹಾರಾತೋತ್ಸವದೊಂದಿಗೆ ವಿಜೃಂಭಣೆಯಿAದ ಯಾವುದೇ ಜಾತಿ ಮತ ಇಲ್ಲದೆ ಜಾತ್ರೆ ಜಾತಿ, ಧರ್ಮವನ್ನು ಮೀರಿದ ಜನರ ಪಾಲುದಾರಿಕೆಯದ್ದು. ಆದರೆ ಆ ಕುರಿತ ವಿಶೇಷ ಚಿಂತನೆ ಜನರಲ್ಲಿ ಏನೂ ಇರುವುದಿಲ್ಲ ಎನ್ನುವುದು ಗಮನಿಸಲೇಬೇಕಾದ ಅಂಶ. ಹೀಗೆ ಸದ್ದಿಲ್ಲದೆ ಧಾರ್ಮಿಕ ಸಾಮರಸ್ಯ ಹಾಗೂ ಭಾವೈಕ್ಯದ ದೀಪವೊಂದು ಜಾತ್ರೆಯಿಂದ ಜಾತ್ರೆವರೆಗೆ ಉರಿಯುತ್ತಲೇ ಇರುತ್ತದೆ.
ಮುರುಘರಾಜೇಂದ್ರ ಸ್ವಾಮಿಗಳ ಜನ್ಮಸ್ಥಳ ಬಿನ್ನಾಳ.ಚಿತ್ರದುರ್ಗ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಆಗಿನ ರಾಯಚೂರು ಈಗಿನ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ಹಿರೇಮಠದ ತಂದೆ ಗುರುಶಾಂತಯ್ಯ ತಾಯಿ ಬೋರಮ್ಮ ಇವರ ಉದರದಲ್ಲಿ ಜನಿಸಿದ ಇವರು ನಮ್ಮ ಕುಟುಂಬದ ಹಿರಿಯ ತಲೆಮಾರಿನ ಶ್ರೀಗಳು ಎಂದು ಮೊಮ್ಮಗ ಚೆನ್ನಯ್ಯ ಹಿರೇಮಠ ತಿಳಿಸಿದರು. ಶ್ರೀಗಳು ಬಿನ್ನಾಳ ಗ್ರಾಮದವರಾಗಿದ್ದರಿಂದ ಅಲ್ಲಿನ ಮಠದ ಭಕ್ತರು ಅವರ ಜಾಗೆಯಲ್ಲಿ ಒಂದು ಮಠ ನಿರ್ಮಾಣ ಮಾಡಿದ್ದು ಮಠದಲ್ಲಿ ಶ್ರೀಗಳ ಮೂರ್ತಿ ಪ್ರತಿಷ್ಠಾಪನೆ ಇದೆ.
ಜಾತ್ರೆಯ ಹಿನ್ನೆಲೆ : ಕಲಬುರಗಿಯ ಮಹಾ ದಾಸೋಹಿ ಈ ಬಿನ್ನಾಳ ಗ್ರಾಮದ ಜಾತ್ರೆಗೆ ಸುಮಾರ 69 ವರ್ಷದ ಪರಂಪರೆ ಇದೆ, ಇದು ಕಲಬುರ್ಗಿಯ ಶರಣ ಬಸವೇಶ್ವರ ಭಕ್ತಿಯ ಪರಂಪರೆಯ ಜಾತ್ರೆಯಾಗಿದೆ ಯಾಗಿದೆ, ಬಿನ್ನಾಳ ಗ್ರಾಮದ ಭಕ್ತರು ಕಲಬುರ್ಗಿಯ ಶರಣಬಸವೇಶ್ವರ ದೇವರಿಗೆ ಭಕ್ತಿ ಪೂರಕವಾಗಿ ಸುಮಾರ 69 ವರ್ಷಗಳಿಂದ ಶ್ರಾವಣ ಮಾಸದಲ್ಲಿ ಸೋಮವಾರ ದಿನ ಜಾತ್ರೋತ್ಸವ ಆಚರಣೆ ಮಾಡುತ್ತಾ ಬಂದಿದ್ದಾರೆ, ಸೋಮವಾರ ದಿನವೂ ಶರಣಬಸವೇಶ್ವರರು ದಿನ ಎಂದು ಪ್ರತೀತಿ ಇದೆ . ಏಕೆಂದರೆ ಶರಣಬಸವೇಶ್ವರ ಸೋಮವಾರ ದಿನ 11.03.1822 ಅನಾರೋಗ್ಯದಿಂದ ಲಿಂಗೈಕ್ಯರಾದರು.
ಶ್ರೀ ಶರಣಬಸವೇಶ್ವರ ಜಾತ್ರೆ ಸಾಗಿ ಬಂದ ಹಿನ್ನೆಲೆ : ಸೋಮವಾರದಂದು ಶ್ರೀ ಬಸವೇಶ್ವರರ ಜಾತ್ರಾ ಮಹೋತ್ಸವು ಸಡಗರ ಸಂಭ್ರಮದಿರಾ ಈ ಬಿನ್ನಾಳ ಗ್ರಾಮದ ಆರಾಧ್ಯ ದೈವ ಬಸವಣ್ಣ. ಶ್ರಾವಣ ಮಾಸದಲ್ಲಿ ಆಚರಿಸಲ್ಪಡುತ್ತದೆ. ಕೊಪ್ಪಳ ಜಿಲ್ಲಾದ್ಯಂತ ಅಷ್ಟೇಯಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ತಮ್ಮ ಹರಕೆಗಳನ್ನು ಪೂಜೆ ಪುನಸ್ಕಾರಗಳನ್ನು ಸಲ್ಲಿಸುವರು. ಈಗಿರುವ ಕಲ್ಲಿನ ಬಸವ ದೇವರಗುಡಿ ಇತ್ತೀಚಿಗೆ ಎರಡು ದಶಕಗಳ ಹಿಂದೆ ಜೀರ್ಣೋದ್ದಾರಗೊಂಡಿದೆ. ಇಡೀ ಶ್ರಾವಣ ಮಾಸದಲ್ಲಿ ಕಲಬುರಗಿಯ ಶರಣಬಸವೇಶ್ವರ ಪುರಾಣ ಪ್ರವಚನವ ನಡೆಯುವುದು. ಬಸವಣ್ಣನ ಜಾತ್ರೆಯ ವಿಶೇಷತೆಯಾಗಿದೆ.
ಜಾತ್ರೆಯ ಮುನ್ನಾದಿನ ಹುಚ್ಚಯ್ಯನ ಮೆರವಣಿಗೆ ನಡೆದರೆ, ನಂದಿ ಕೋಲುಗಳ ಕುಣಿತವೇ ಬಸವಣ್ಣನ ಜಾತ್ರೆಯ ವಿಶೇಷತೆಗಳಲ್ಲಿ ಒಂದು. ಶಿವನ ವಾಹನವು ನಂದಿ, ಶಿವನ ಸ್ವರೂಪಿಯಾದ ಬಸವಣ್ಣನ ಚಿಕ್ಕ ಮೂರ್ತಿಯನ್ನು ಬೃಹತ್ತಾದ ಬಿದಿರಿನ ಕೋಲಿನಲ್ಲಿ ಪ್ರತಿಷ್ಠಾಪಿಸಿ, ವಿವಿಧ ಬಟ್ಟೆಗಳಿಂದ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿ ಅವುಗಳನ್ನು ಹೊತ್ತಿಕೊಂಡು ಕುಣಿಯುವುದರ ಮೂಲಕ ನಂದಿಕೋಲ ಸೇವಾ ಕಾರ್ಯವು ನೆರವೇರುತ್ತದೆ. ಜಾತ್ರೆ ಆರಂಭವೂ ನಂದಿಕೋಲಿನ ಪೂಜೆಯೊಂದಿಗೆ ಊರ ಆಚೆ ಇರುವ ಅಯ್ಯನಕೇರಿ ಬಸವಣ್ಣನ ಕಟ್ಟೆಗೆ ನಂದಿಕೋಲು ತೆರಳಿ ಪೂಜೆ ಸಲ್ಲಿಸಿ ಮರಳಿ ಗ್ರಾಮವನ್ನು ಪ್ರವೇಶಿಸುವುದರೊಂದಿಗೆ ಜಾತ್ರೆಯ ಸಂಭ್ರಮವು ಇಮ್ಮಡಿಗೊಳ್ಳುತ್ತದೆ.
ಮಹಾರಥೋತ್ಸವ : ಬಿನ್ನಾಳ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವ ಸೋಮವಾರ ನಡೆಯಲಿದ್ದು ಗ್ರಾಮ ಸಿಂಗಾರಗೊಂಡಿದೆ. ಜಾತ್ರೆ ಆ.10 ರಿಂದ ಆರಂಭವಾಗಿದ್ದು ಆ.12ರಂದು ಸಂಪನ್ನವಾಗಲಿದೆ. ಬಸವೇಶ್ವರ ದೇವಸ್ಥಾನ, ಗೋಪುರ, ದ್ವಾರ ಬಾಗಿಲುಗಳನ್ನು ತೋರಣಗಳಿಂದ ಸಿಂಗರಿಸಲಾಗಿದ್ದು, ಮಹಾರಥೋತ್ಸವಕ್ಕೆ ತೇರು ಸಿಂಗರಿಸುವ ಕಾರ್ಯ ಭರದಿಂದ ಸಾಗಿದೆ. ಹಳ್ಳಿ ಸೊಗಡನ್ನು ಬಿಂಬಿಸುವ ಜಾತ್ರೆಗೆ ಗ್ರಾಮಸ್ಥರಷ್ಟೇ ಅಲ್ಲದೆ ಸುತ್ತಮುತ್ತ ಲಿನ ಗ್ರಾಮಸ್ಥರು ಸಜ್ಜಾಗಿದ್ದಾರೆ.ಕಳೆದ ವಾರದಿಂದ ಬಿನ್ನಾಳ ಗ್ರಾಮದ ಪಂಚಾಯಿತಿ ವತಿಯಿಂದ ಗ್ರಾಮದ ಪ್ರಮುಖ ಬೀದಿ ಸೇರಿದಂತೆ ಪ್ರತಿ ವಾರ್ಡ್, ಜಾತ್ರೆಯ ಆವರಣದ ಸ್ವಚ್ಛ ಮಾಡಲಾಗಿದೆ. ಕುಡಿಯುವ ನೀರಿಗೆ ಯಾವುದೇ ರೀತಿ ತೊಂದರೆಯಾಗದAತೆ ವ್ಯವಸ್ಥೆ ಮಾಡಲಾಗಿದೆ. ಎರಡು ದಿನ ದಾಸೋಹ: ಜಾತ್ರೆಗೆ ಆಗಮಿಸುವ ಭಕ್ತರಿಗೆ ಎರಡು ದಿನಗಳ ಕಾಲ ನಿರಂತರವಾಗಿ ದಾಸೋಹ ನಡೆಯಲಿದೆ. ಭಕ್ತರು ದವಸ ಧಾನ್ಯ, ರೊಟ್ಟಿ, ಕಟ್ಟಿಗೆ ಸೇರಿದಂತೆ ವಿವಿಧ ಸಾಮಾಗ್ರಿಗಳನ್ನು ಮಠಕ್ಕೆ ಸಮರ್ಪಿಸುತ್ತಿದ್ದಾರೆ. ಶನಿವಾರ ಕೂಡ ದಾಸೋಹದ ಗ್ರಾಮದ ಷಣ್ಮುಖೇಶ್ವರ ದೇವಸ್ಥಾನದಲ್ಲಿ ಗ್ರಾಮದ ಸರ್ಕಾರಿ ನೌಕರರು ಮತ್ತು ಗ್ರಾಮದ ಎಲ್ಲಾ ಗ್ರಾಮದ ಸಹಕಾರದಿಂದ ಆವರಣವನ್ನು ಸಿದ್ಧತೆ ಮಾಡುವುದು ಕಂಡುಬಂತು.
ಕಾರ್ಯಕ್ರಮಗಳು: ಸೋಮವಾರ ಆ.11 ಶ್ರೀ ಶರಣ ಬಸವೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀ ಶರಣ ಬಸವೇಶ್ವರರ ಮೂರ್ತಿಗೆ ರುದ್ರಾಭಿಷೇಕ, ಧರ್ಮಸಭೆ ನಡೆಯಲಿವೆ. ಶ್ರೀ ಶರಣ ಬಸವೇಶ್ವರರ ಜಾತ್ರಾ, ಮುಖ್ಯ ಅತಿಥಿಗಳಿಂದ ಧ್ವಜಾರೋಹಣ ಹಾಗೂ ಶ್ರೀ ಶರಣ ಬಸವೇಶ್ವರರ ಜಾತ್ರಾ ಮಹಾರಥೋತ್ಸವ ಜರುಗಲಿದೆ. ಶ್ರಾವಣ ಮಾಸದಲ್ಲಿ ಪುರಾಣ ಸೇರಿದಂತೆ ಅನೇಕ ಧಾರ್ಮಿಕ ಸಮಾರಂಭಗಳು ಜರುಗುತ್ತವೆ.