ಹೊಸಶಕೆ ನ್ಯೂಸ್-ವಿಜಯನಗರ (ಹೊಸಪೇಟೆ): ನಾವು ಜನರಿಗೆ ಕೊಟ್ಟ ಭರವಸೆ ಎಲ್ಲವೂ ಈಡೇರಿಸಿದ್ದೇವೆ. ಗ್ಯಾರಂಟಿ ಜೊತೆಗೆ ಅಭಿವೃದ್ಧಿಗೂ ಕೋಟಿ ಕೋಟಿ ಹಣ ಬಿಡುಗಡೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಡಾ. ಪುನೀತರಾಜಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಸರ್ಕಾರದ ಸಾಧನಾ ಸಮಾವೇಶದ ಸಿದ್ಧತೆ ಪರಿಶೀಲಿಸಿದ ಬಳಿಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಹಾಗೂ ಸಚಿವರುಗಳೊಂದಿಗೆ ನಡೆಸದಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 20 ರಂದು ಸರಕಾರ ಬಂದು ಎರಡು ವರ್ಷವಾಯ್ತು. ಹತ್ತು ಜನರು ಮೊದಲು ಪ್ರಮಾಣ ಸ್ವೀಕಾರ ಮಾಡಿದ್ದೆವು. ಅಂದೇ ಗ್ಯಾರಂಟಿ ಯೋಜನೆಯನ್ನು ಮೊದಲ ಕ್ಯಾಬಿನೇಟ್ ನಲ್ಲಿ ತೀರ್ಮಾನಿಸಿದೆವು. ಸರಕಾರ ಬಂದು ಎರಡು ಮೂರು ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಯೋಜನೆ ಜಾರಿಗೆ ತಂದೆವು. ಎರಡು ವರ್ಷದ ಸಾಧನೆ ಜನರ ಮುಂದೆ ಇಡಬೇಕೆಂದು ಸಮಾವೇಶ ಮಾಡುತ್ತಿದ್ದೇವೆ ಎಂದರು. ಈ ರೀತಿಯಲ್ಲಿ ಮಾಡಿರಿ…
ಸಮಾವೇಶದಲ್ಲಿ ಒಂದು ಲಕ್ಷ ಜನರಿಗೆ ಹಕ್ಕು ಪತ್ರ ವಿತರಣೆ ಮಾಡ್ತೇವೆ. ಹಟ್ಟಿ, ತಾಂಡಾ, ಕ್ಯಾಂಪ್, ಹಾಡಿಗಳು ಇವೆಲ್ಲವನ್ನೂ ಕಂದಾಯ ಗ್ರಾಮವೆಂದು ಘೋಷಣೆ ಮಾಡ್ತೇವೆ. ಸೇಡಂನಲ್ಲಿ ಬಂದು ಮೋದಿಯವರು ಐವತ್ತು ಸಾವಿರ ಹಕ್ಕು ಪತ್ರ ಕೊಡ್ತೇವೆ ಎಂದು ಹೇಳಿದ್ರು ಯಾವುದೇ ಆಗಿಲ್ಲ. ನಮ್ಮ ಸಮಾವೇಶದಲ್ಲಿ ಮೂರು ಲಕ್ಷ ಜನರು ಸೇರುವ ಸಾಧ್ಯತೆ ಇದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಆಶೋಕ್, ಚಲುವಾದಿ ನಾರಾಯಣ ಸ್ವಾಮಿ ಕೇಂದ್ರ ಮಂತ್ರಿಗಳನ್ನು ಕರೆದಿದ್ದೇವೆ. ಸರಕಾರಿ ಕಾರ್ಯಕ್ರಮ ಹಿನ್ನೆಲೆ ವಿರೋಧ ಪಕ್ಷದ ನಾಯಕರನ್ನು ಕರೆದಿದ್ದೇವೆ ಎಂದು ತಿಳಿಸಿದರು. ಗ್ಯಾರಂಟಿ ಸ್ಕೀಮ್ ವಿರೋಧಿಸಿದ ಬಿಜೆಪಿ ಇದೀಗ ನಮ್ಮನ್ನು ಫಾಲೋ ಮಾಡ್ತಿದ್ದಾರೆ.. ಕರ್ನಾಟಕ ಮಾಡೆಲ್ ದೇಶಕ್ಕೆ ರೋಲ್ ಮಾಡೆಲ್. ಬಿಜೆಪಿ ನಮ್ಮನ್ನು ಅನುಕರಣೆ ಮಾಡ್ತಿದ್ದಾರೆ, ವಿರೋಧ ಪಕ್ಷದವರು ಅಭಿವೃದ್ಧಿಗೆ ದುಡ್ಡಿಲ್ಲ ಎಂದು ಅರೋಪಿಸುತ್ತಿದ್ದಾರೆ. ಆದರೆ, ಎಲ್ಲಾ ಕ್ಷೇತ್ರದಲ್ಲಿಯೂ ಅಭಿವೃದ್ಧಿಗೆ ಹಣ ಕೊಟ್ಟಿದ್ದೇವೆ. ತೊಂಬತ್ತು ಸಾವಿರ ಕೋಟಿ ಹಣ ಗ್ಯಾರಂಟಿಗೆ ಮೀಸಲಿಟ್ಟಿದ್ದೇವೆ, ಎರಡು ವರ್ಷದ ಸಾಧನೆ ಜನರ ಮುಂದೆ ಇಡಬೇಕೆಂದು ಸಮಾವೇಶ ಮಾಡುತ್ತಿದ್ದೇವೆ ಎಂದು ಹೇಳಿದರು
== ಬಿಜೆಪಿಯವರು ಹೇಳುತ್ತಿರುವುದು ಸುಳ್ಳು ಎನ್ನುವುದು ಸಾಬೀತಾಗಿದೆ. ಹೇಳಿರೋದು ಮತ್ತು ನಾವು ಮಾಡಿರೋದು ಜನರಿಗೆ ತಿಳಿಸುವ ಕೆಲಸ ಮಾಡ್ತೇವೆ. ಬಜೆಟ್ ಗಾತ್ರ ದೊಡ್ಡದಾಗಿ ಮಾಡಿದ್ದೇವೆ. ಸರಕಾರ ದಿವಾಳಿಯಾಗಿದ್ದರೆ, ಹಣ ಇಲ್ಲದೇ ಇದ್ದರೆ, ಬಜೆಟ್ ಗಾತ್ರ ಜಾಸ್ತಿಯಾಗುತ್ತಿತ್ತಾ? ಮೂವತ್ತೆಂಟು ಸಾವಿರ ಕೋಟಿ ಹಣ ಬಜೆಟ್ ಗಾತ್ರ ಹೆಚ್ಚಾಗಿದೆ. ಮೂಲಭೂತ ಅರ್ಥಿಕತೆ ಬಗ್ಗೆ ಬಿಜೆಪಿಯವರಿಗೆ ಗೊತ್ತಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಐದು ಸಾವಿರ ಕೋಟಿ ಕೊಟ್ಟಿದ್ದೇವೆ. ಚುನಾವಣೆ ವರ್ಷ ಕೆಕೆಅರ್ಡಿಬಿ ಬೋರ್ಡ್ ಗೆ ಬೊಮ್ಮಾಯಿ ಮೂರು ಸಾವಿರ ಕೋಟಿ ಎಂದು ಘೋಷಣೆ ಮಾಡಿ, ಬಿಡುಗಡೆ ಮಾಡಲಿಲ್ಲ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇಂದ್ರ ಸರಕಾರ ಬಿಡಿಗಾಸು ನೀಡಿಲ್ಲ : ಸಿದ್ದರಾಮಯ್ಯ, ಮುಖ್ಯಮಂತ್ರಿಗಳು==