Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಕೊಪ್ಪಳ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಆದಾಲತ್ ನಲ್ಲಿ 6764 ಪ್ರಕರಣಗಳು ಇತ್ಯರ್ಥ

ವಿಚ್ಛೇಧನ ಕೈಬಿಟ್ಟು ಮತ್ತೇ ಒಟ್ಟಿಗೆ ಬಾಳಲು ಒಂದಾದ ದಂಪತಿಗಳು

Hosashake News by Hosashake News
December 13, 2025
in ಜಿಲ್ಲೆ, ದೇಶ, ಪ್ರಾದೇಶಿಕ, ರಾಜ್ಯ, ಶಿಕ್ಣಣ-ಆರೋಗ್ಯ, ಸಾಮಾಜಿಕ, ಸುದ್ದಿ
0
ಕೊಪ್ಪಳ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಆದಾಲತ್ ನಲ್ಲಿ   6764 ಪ್ರಕರಣಗಳು ಇತ್ಯರ್ಥ
Share on FacebookShare on Twitter

ಹೊಸಶಕೆ ನ್ಯೂಸ್–ಕೊಪ್ಪಳ: ವಿಮೆ, ನೀರಿನ ಕರ, ಮೋಟಾರ್ ವಾಹನ ಅಪಘಾತ ಸೇರಿದಂತೆ ವಿವಿಧ ಪ್ರಕರಣಗಳು ಸೇರಿ ಪೂರ್ವ ದಾವೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 79305 ಪ್ರಕರಣಗಳ ಪೈಕಿ 72591 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಇತ್ಯರ್ಥ ಪಡಿಸಲಾದ ಒಟ್ಟು ಮೌಲ್ಯ 135261312/-ಇದ್ದು, ಒಟ್ಟಾರೆ ಒಂದೇ ದಿನದಲ್ಲಿ ಒಟ್ಟು 87918 ಪ್ರಕರಣಗಳ ಪೈಕಿ 79355 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪ್ರಾಧಿಕಾರ ತಿಳಿಸಿದೆ.

ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಲೋಕ ಆದಾಲತ್ ನಲ್ಲಿ ಒಟ್ಟು 10 ಪ್ರಕರಣಗಳಲ್ಲಿ ಗಂಡ ಹೆಂಡತಿಯರು ಮನಸ್ತಾಪ ಬಿಟ್ಟು ಮಧ್ಯಸ್ಥಿಕೆಯಗಾರರು, ವಕೀಲರು ಹಾಗೂ ನ್ಯಾಯಾಧೀಶರುಗಳ ಸೂಕ್ತ ಮಾರ್ಗದರ್ಶನದ ಕಾರಣಕ್ಕಾಗಿ ಒಟ್ಟಿಗೆ ಬಾಳು ನಡೆಸಲು ಒಪ್ಪಿಕೊಂಡಿರುತ್ತಾರೆ. ಸದರಿ 10 ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಗಂಡ ಹೆಂಡತಿ ಕಳೆದ 10 ವರ್ಷಗಳಿಂದ ದೂರ ಇದ್ದು ಈಗ ಉಭಯ ವಕೀಲರು, ಮಧ್ಯಸ್ಥಿಕೆ ವಕೀಲರು ಹಾಗೂ ನ್ಯಾಯಾಧೀಶರ ಮಾರ್ಗದರ್ಶನದ ಮೇರೆಗೆ ಒಂದಾಗಿರುವುದು ಈ ಸಲದ ಲೋಕ ಅದಾಲತ್‌ನ ವಿಶೇಷವಾಗಿದೆ.  ಇದೆ ಸಂದರ್ಭದಲ್ಲಿ ವಿಮೆ, ನೀರಿನ ಬಿಲ್. ಬ್ಯಾಂಕ್ ಸಾಲ, ಮನೆ ಕರ, ಕೌಟುಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್ ಪ್ರಕರಣಗಳು, ಜನನ ಮರಣ, ಸಿವಿಲ್ ಕೇಸ್, ಕ್ರಿಮಿನಲ್ ಕೇಸ್, ಮೋಟಾರ್ ವಾಹನ ಅಪಘಾತ, ಎಂಎಂಆರ್ಡಿ ಪ್ರಕರಣಗಳು ಹಾಗೂ ಇತ್ಯಾದಿ ಸೇರಿದಂತೆ ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ನ್ಯಾಯಾಲಯಗಳಲ್ಲಿ 8613 ಪ್ರಕರಣಗಳ ಪೈಕಿ 6764 ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು.

ದಾಖಲೆಯ ಮೌಲ್ಯ : ವಿಮೆ, ನೀರಿನ ಕರ, ಮೋಟಾರ್ ವಾಹನ ಅಪಘಾತ ಸೇರಿದಂತೆ ವಿವಿಧ ಪ್ರಕರಣಗಳು ಸೇರಿ ಪೂರ್ವ ದಾವೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 79305 ಪ್ರಕರಣಗಳ ಪೈಕಿ 72591 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಇತ್ಯರ್ಥ ಪಡಿಸಲಾದ ಒಟ್ಟು ಮೌಲ್ಯ 135261312/-ಇದ್ದು, ಒಟ್ಟಾರೆ ಒಂದೇ ದಿನದಲ್ಲಿ ಒಟ್ಟು 87918 ಪ್ರಕರಣಗಳ ಪೈಕಿ 79355 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇತ್ಯರ್ಥಪಡಿಸಲಾದ ಒಟ್ಟು ಮೌಲ್ಯ 939878456/- ಇರುತ್ತದೆ. ಈ ಬಾರಿ ದಾಖಲೆ ಪ್ರಮಾಣದಲ್ಲಿ ಪ್ರಕರಣಗಳನ್ನು ರಾಜಿ ಮೂಲಕ ಇತ್ಯ‌ಥ ಪಡಿಸಲು ಸಹಕಾರ ನೀಡಿದ ಗೌರವಾನ್ವಿತ ನ್ಯಾಯಾಧೀಶರು, ವಕೀಲರು, ಕಕ್ಷಿಗಾರರು, ಮಧ್ಯಸ್ತಿಗಾರ ವಕೀಲರುಗಳಿಗೆ ಧನ್ಯವಾದಗಳು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪ್ರಾಧಿಕಾರ, ಕೊಪ್ಪಳ ಅವರು ತಿಳಿಸಿದ್ದಾರೆ.

Previous Post

ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಅಭಿಯೋಜಕರ ಪಾತ್ರ ಬಹುಮುಖ್ಯವಾದುದು : ಐಜಿಪಿ ವರ್ತಿಕಾ ಕಟಿಯಾರ್

Next Post

ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಅಳವಡಿಸಿಕೊಳ್ಳುವುದೇ ಶಿಕ್ಷಣದ ಉದ್ದೇಶ: ಸಿದ್ದರಾಮಯ್ಯ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

ಹೊಸಶಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2026 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2026 Hosashakenews - Powered by KIPL.

error: Content is protected !!