ಹೊಸಶಕೆ ನ್ಯೂಸ್-ಕೊಪ್ಪಳ:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಾರ್ಚ್ 9 ನಗರದ ಕಠಾರೆ ಕಲ್ಯಾಣ ಮಂಟಪದಲ್ಲಿ ಜರುಗುವ ರಾಜ್ಯಮಟ್ಟದ ದತ್ತಪ್ರಶಸ್ತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ ಅವರು ನಡೆಸಿದರು.
ಪೂರ್ವಭಾವಿ ಸಭೆ ಬಳಿಕ ಭಾಗ್ಯನಗರ ಹಾಗೂ ನವನಗರದ ನೇಕರಾರ ಮನೆಗೆ ಬೇಟಿ ನೀಡಿ ನೇಕಾರಿಕೆಯನ್ನು ವೀಕ್ಷಣೆ ಮಾಡಿ ಮಾಹಿತಿ ಪಡೆದರು. ಅಲ್ದೆ ನೇಕರಾರರು ತಯಾರಿಸಿ ಎರಡು ಸೀರೆಗಳನ್ನು ಖರೀದಿಸಿದರು, ನಂತರಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷರಾದ ಬಸವರಾಜ್ ಗೂಡ್ಲಾನೂರ ಹಾಗೂ ಖಜಾಂಚಿ ರಾಜು ಬಿ.ಆರ್ ಅವರ ನೂತನ ಗೃಹಕ್ಕೆ ಭೇಟಿ ನೀಡಿ ಗೌರವ ಸ್ವೀಕರಿಸಿದರು.
ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ್, ರಾಜ್ಯ ಸಮಿತಿ ಸದಸ್ಯರಾದ ದೇವರಾಜ್, ವಿಶೇಷ ಆಹ್ವಾನಿತರಾದ ಹರೀಶ್ ಹೆಚ್ ಎಸ್, ಜಿಲ್ಲಾಧ್ಯಕ್ಷರಾದ ಹನುಮಂತ ಹಳ್ಳಿಕೇರಿ, ಪತ್ರಕರ್ತ ಬಸವರಾಜ್ ಗೂಡ್ಲಾನೂರ, ರಾಜು ಬಿ.ಆರ್, ಬಸವರಾಜ್ ಪಲ್ಲೆದ ಇದ್ದರು.